ಬೆಳಗಾವಿ,ಫೆ.೧: ಐಪಿಎಲ್‌ನಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಸೇರಿಸಬೇಕೆಂಬ ಹೇಳಿಕೆ ನೀಡಿದ ನಟ ಶಾರೂಖ್ ಖಾನ್ ಅಭಿನಯದ ಇದೇ ಫೆ.೧೨ರಂದು ಬಿಡುಗಡೆಗೊಳ್ಳಲಿರುವ ‘ಮೈನೇಮ್ ಈಸ್ ಖಾನ್’ ಚಿತ್ರ ರಾಜ್ಯದಲ್ಲಿ ಬಿಡುಗಡೆ ಮಾಡಿದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಟುರುಹಾಕಿದ್ದಾರೆ.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಪಾಕಿಸ್ತಾನಿಗಳನ್ನು ಬೆಂಬಲಿಸುವ ಶಾರೂಖ್ ಖಾನ್ ಯಾವುದೇ ಚಿತ್ರಗಳನ್ನು ರಾಜ್ಯದ ಚಿತ್ರಮಂದಿರಗಳ ಮಾಲಕರು ಬಿಡುಗಡೆ ಮಾಡಬಾರದು. ಒಂದು ವೇಳೆ ರಾಜ್ಯದ ಚಿತ್ರದ ಮಂದಿರಗಳ ಮಾಲಕರು ಖಾನ್ ಚಿತ್ರ ಬಿಡುಗಡೆ ಮುಂದಾದರೆ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಫೆ.೧೪ರಂದು ನಡೆಯಲಿರುವ ಪ್ರೇಮಿಗಳ ದಿನಾಚರಣೆಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಇದನ್ನು ಮೀರಿ ಆಚರಣೆ ಮಾಡಿದರೆ ಅಡ್ಡಿಪಡಿಸಲಾಗುವುದು ಎಂದು ಕಿಡಿಕಾರಿದ ಮೊತಾಲಿಕ್, ಹೊಟೇಲ್, ಪಬ್ ಹಾಗೂ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳಿಗೆ ಪ್ರೇಮಿಗಳ ದಿನಾಚರಣೆ ಮಾಡದಿರಲು ಈಗಾಗಲೇ ಮನವಿ ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಸ್ಥಿತಿ ಸರಿಯಾಗಿರುವುದಿಲ್ಲ ಎಂದು ಗುಡುಗಿದರು.